(ಈ ಹಾಡು "ಪಂಚರಂಗಿ" ಚಿತ್ರದ, "ಉಡಿಸುವೆ ಬೆಳಕಿನ ಸೀರೆಯ.." ಹಾಡಿನ ಧಾಟಿಗೆ ಬರೆದ ನೂತನ ಸಾಹಿತ್ಯ.)
ಒಲವಿನ ಅಲೆಗಳ ಸಾಗರ..
ತುಂಬಿದೆ., ಎದೆಯೊಳಗೆ..
ಇಂದು ಉಕ್ಕಿ ಬಂದ, ಕಾರಣ ಈಗಲೇನೇ ನಾನು ಕಂಡ..
ನಿನ್ನೊಂದು ಹೂನಗೆ....
ಒಲವಿನ ಅಲೆಗಳ ಸಾಗರ......
ನೀ ಬಂದ ಈ ಅಂದದ ದಾರಿ.. ನಿಂತಿಹುದು ಹಸಿರು ಚಿಗುರಿ.,
ಮೈದಾಳಿದೆ ಹೂವಿನ ಕೇರಿ.. ನಿನ್ನಯದೇ ಹೆಸರು ಉಸುರಿ..
ಕನಸಿನ ಮಣಿ ಕಲೆಹಾಕುವ ಬಾ, ಈ ಘಳಿಗೆ., ಈ ಕಣ್ಣಲ್ಲೇ ಮೆಲ್ಲಗೆ....||೧||
ಒಲವಿನ ಅಲೆಗಳ ಸಾಗರ..
ತುಂಬಿದೆ., ಎದೆಯೊಳಗೆ..
ಇಂದು ಉಕ್ಕಿ ಬಂದ, ಕಾರಣ ಈಗಲೇನೇ ನಾನು ಕಂಡ..
ನಿನ್ನೊಂದು ಹೂನಗೆ....
ನೂರಾರು ಚಂದಿರರ ಬೆಳಕಿನ ಕೂಟ.. ನಲ್ಮೆಯ ನೋಟ.. ಮುಂಗುರುಳಲಿ..
ನೀನೇನೆ ಸುಂದರದ ನೆನಪಿಗೆ ಜೋಡಿ.. ಮಾಯದ ಮೋಡಿ.. ಮುಂಬೆಳಗಲಿ...
ನಿನ್ನ ಜಾಡಿನಲ್ಲೇ, ಇನ್ನೀಗ ಎಲ್ಲ ಪಾಡು.. ನನ್ನ ಹಾಡಿನ ದೋಣಿಯ ಬೀಡು ಎಂದೂ ನೀನಿದ್ದಲ್ಲಿಗೆ.....||೨||
ಒಲವಿನ ಅಲೆಗಳ ಸಾಗರ..
ತುಂಬಿದೆ., ಎದೆಯೊಳಗೆ..
ಇಂದು ಉಕ್ಕಿ ಬಂದ, ಕಾರಣ ಈಗಲೇನೇ ನಾನು ಕಂಡ..
ನಿನ್ನೊಂದು ಹೂನಗೆ....||
No comments:
Post a Comment