( "ಜಿಂದಗೀ ಭರ್ ನಹೀ ಭೂಲೇಗಿ ಓ ಬರಸಾತ್ ಕಿ ರಾತ್" ಅಂತ ಒಂದು ಹಿಂದಿ ಹಿಟ್ ಹಾಡನ್ನು ನೀವೆಲ್ಲ ಕೇಳಿರ್ತೀರಿ..
ಅದನ್ನ ಯಥಾವತ್ತಾಗಿ ಅನುವಾದಿಸಿದ ಯತ್ನವಿದು..)
ಮರೆಯಲಾರೆನು ನಾ ಬದುಕಿಡೀ ಆ ಮಳೆಯ ರಾತ್ರಿಯನು..
ಅಪರಿಚಿತದೊಂದು ತರುಣಿಯೊಂದಿಗೆ ಸಿಹಿ ಭೇಟಿಯನು..||
ಮರೆಯಲಾರೆನು ನಾ ಬದುಕಿಡೀ....
ಹಾ..ಆ ರೇಶಿಮೆ ಮುಂಗುರುಳಿಂ ಜಿನುಗಿದ ಹನಿಯು..
ಹೂ ತೊರೆದು ಕೆನ್ನೆಯ ಚುಂಬಿಸಲು, ತವಕಿಸಿದ ಹನಿಯು..
ಮನದಿ ಸವಿಭಾವದ ಬಿರುಗಾಳಿ.. ಬೀಸಿದ ರಾತ್ರಿಯನು..||೧||
ಮರೆಯಲಾರೆನು ನಾ ಬದುಕಿಡೀ ..
ಒಮ್ಮೆಲೇ ಜಿಗಿದ ಸಿಡಿಲರವಕೆ ಕಂಪಿಸುತಲಿ ಅವಳು..
ನಾಚುತಾ ಧಾರೆಯಾಗಲು ಮತ್ತೆ, ಹೊಸತು ರೂಪಗಳು..
ಎಂದೂ ದರ್ಶಿಸದ ಶ್ರಾವಿಸದ.. ರೋಚಕ ರಾತ್ರಿಯನು..||೨||
ಮರೆಯಲಾರೆನು ನಾ ಬದುಕಿಡೀ..
ಸೆರಗಿನಂಚಿಂದಲಿ ಮುಂಬರುವ ಪುಳಕದ ಮಾಲೆ..
ಎದೆಗೆ ಸುಡುಬಾಣವ ಹೂಡಿರಲು ಬೆಳಕಿನ ಬಾಲೆ..
ಸುರಿವ ನೀರಲ್ಲಿಯೂ ಕಿಡಿಯೊಂದು..ಸೋಕಿದ ರಾತ್ರಿಯನು..||೩||
ಮರೆಯಲಾರೆನು ನಾ ಬದುಕಿಡೀ..
ಕಣ್ಣಪೆಟ್ಟಿಗೆಯ ಒಳಗೆ ಕಂಡ ಚಿತ್ರಪಟದ ರೇಖೆ..
ಯೌವನದ ಈ ಸ್ವಪ್ನಕೋಟೆಯನು ತೆರೆದ ಚಾವಿ ಆಕೆ..
ಆಗಸದಿ ನೇರ ಧರೆಗಿಳಿದಂಥ.. ಮಾಯದ ರಾತ್ರಿಯನು..||೪||
ಮರೆಯಲಾರೆನು ನಾ ಬದುಕಿಡೀ ಆ ಮಳೆಯ ರಾತ್ರಿಯನು....

ಭಾವಾನುವಾದರೂ ಮೂಲಕ್ಕೆ ಚ್ಯುತಿ ಬಂದಿಲ್ಲ ಭೀಮಣ್ಣಾ, ಶಭಾಷ್...
ReplyDeleteನನ್ನ ಬ್ಲಾಗಿಗೂ ಸ್ವಾಗತ.