Tuesday, March 6, 2012

ಹೃದಯವಾಣಿ

ಎನ್ನೊಡಲ ಪರಿವಿಡಿಯ ಸೂಚಕವೇ ನಿನ್ನುಸಿರು
ಎದೆಯ ರಂಗಿನ ಪುಟದಿ ರತ್ನರೂಪ..
ನೆನಪ ದಿನಗೂಲಿಯಲಿ, ಕನಸಿನಿಟ್ಟಿಗೆಯಿಂದ
ನಿರ್ಮಿಸಲು ಬಾ ಬೇಗ ಪ್ರೇಮದ್ವೀಪ...||


ಇರುವ ಸ್ಥಿತಿಯಲೇ ಎಲ್ಲೋ ಮೆರೆವಂತೆ ಮೋಹಿಸುವ 
ಹೂಪರಾಗದ ಸೊಬಗಿಗೆ ಪರಾಕು..
ನನ್ನ ಓಲೆಯ ವಸಂತವ ಪರಾಂಬರಿಸುತಲಿ
ಮೌನಿಸದೆ ಒಲವ ಸಿಂಗರಿಸು ಸಾಕು..||


ಹೃದಯ ಮಿಡಿಯುವ ಧ್ವನಿಯು, ಜೀವತಾಳುತಲಿಂದು
ದಿಗ್ಭ್ರಮೆಯ ಸಂಭ್ರಮವೇ ವ್ಯಾಪಿಸಿಹುದು..
ನಿನ್ನ ಪಾದದ ರೇಖೆ ಕಣಕಣದಿ ಒಡಮೂಡಿ
ಬಾಳ ಹೊಸ ಸಂಚಿಕೆಯು ಛಾಪಿಸಿಹುದು..!||


1 comment:

  1. ಅಂತರಂಗ ಮೃದಂಗ ಎಂದೊಡನೆ ಅರಿವಾಗಿತ್ತು ಭಾವಗಳು ಮೇಳೈಸುತ್ತವೆಂದು.. ಓದುಗನ ನಿರೀಕ್ಷೆ ಹುಸಿಯಾಗಿಸದ ಸಶಕ್ತ ಕವಿ ನೀವು ಭೀಮಣ್ಣ.. ಹೃದಯವಾಣಿ ಮನದಾಳಕ್ಕೆ ಲಗ್ಗೆ ಇಡುವಂತೆ ಮೂಡಿ ಬಂದಿದೆ.. ಪದಗಳೊಡಗಿನ ಲಾಸ್ಯ ಮನ ತುಂಬಿ ತಲೆದೂಗುತ್ತೇನೆ.. ಚೆಂದದ ಕವಿತೆ, ತುಂಬಾ ಇಷ್ಟವಾಯ್ತು..:)))

    ReplyDelete