ಮುಂಬಾಗಿಲಂಚಿನಲಿ ಕೊಂಚ ಮಿಂಚಾಡಿಸುವ
ರೆಪ್ಪೆ ಬಡಿಯದ ನಿನ್ನ ಕಂಗಳು ಹೊಳೆದು..
ಮತ್ತೊಮ್ಮೆ ಕರೆದಂತೆ ಭಾಸ; ಬರಲೇ? ಬಿಡಲೇ?
ಸಂದಿಗ್ಧಭಾವದಲಿ ಹೃದಯ ನಿಂತಿಹುದು..||
ರೆಪ್ಪೆ ಬಡಿಯದ ನಿನ್ನ ಕಂಗಳು ಹೊಳೆದು..
ಮತ್ತೊಮ್ಮೆ ಕರೆದಂತೆ ಭಾಸ; ಬರಲೇ? ಬಿಡಲೇ?
ಸಂದಿಗ್ಧಭಾವದಲಿ ಹೃದಯ ನಿಂತಿಹುದು..||
ಏರಿ ಕೂತಿಹ ಬಂಡಿ, ಓಡುತಿದೆ ಊರಿನೆಡೆ
ಬರಲೊಪ್ಪದೆನ್ನ ಮನವೆಳೆದು ಸೆಳೆದು..
ಹಾದಿಯ ಇಕ್ಕೆಲದಿ ನಿಂತ ಹಸುರಿನ ಚೆಲುವು
ನನ್ನ ಏಕಾಂತ ತಣಿಸದಲೇ ಸೋತಿಹುದು..||
ನಿನ್ನ ನಗುವಿರದೆ ಆರಂಭವಾಗುವ ಬೆಳಗು
ನಿನ್ನ ಮಾಂತ್ರಿಕಸ್ಪರ್ಷವಿರದಡಿಗೆ ಘಮವು..
ನಿನ್ನ ಹೂಬಂಧದಲಿ ಕರಗಿಹೋಗದ ರಾತ್ರಿ
ನೆನೆದೆ ಬರಿ ಪರಿತಪಿಸುತಿಹೆ ನಾನು ಕ್ಷಣವೂ..||
ತವರಿನಂಗಳದಲ್ಲಿ ನಿನಗೆ ಬಾಲ್ಯದ ನೆನಪು
ನನಗಾದರೋ ವಿರಹದುರಿಯೇ ನೂರೊಂದು..
ದಿನವು ಕಳೆಯಲು ಗೀಚುವೆ ದಿನಾಂಕದ ಗುರುತು
ಸಂತೈಸಲಾವರಿಸು ಬಳಿ ಬೇಗ ಬಂದು..||
ಚಿತ್ರಕೃಪೆ - ಅಂತರ್ಜಾಲ
"ದಿನವು ಕಳೆಯಲು ಗೀಚುವೆ ದಿನಾಂಕದ ಗುರುತು"
ReplyDeleteಎನ್ನುವ ಕವಿಯ ಮನದಳಲು ಇಲ್ಲಿ ಸಮರ್ಥವಾಗಿ ಬಿಂಬಿತವಾಗಿದೆ. ಅದೆಷ್ಟು ಕಾವ್ಯಮಯವಾಗಿ ಬರೀತೀರಿ ಭೀಮಸೇನ!
(ಪಿಸುಮಾತು: ಪ್ರೇಮಪತ್ರಗಳ ಪರಿಣಿತರು ತಾವು ಎಂದು ಕಾಣುತ್ತದೆ)
ನವಿರಾಗಿ ಭಾವಗಳನ್ನು ಪೋಣಿಸಿದ ಕವನ..
ReplyDeleteತುಂಬಾ ಇಷ್ಟ ಪಟ್ಟೆ..
ಚನ್ಣಾಗ್ ಇದೆ ಭೀಮ
ReplyDeleteಅದ್ಭುತ ಕಲ್ಪನೆ..:) ರಸಮಯ ಕಾವ್ಯ..:)
ReplyDelete