ಭಾಷೆಗಳ ಬಾನಲ್ಲಿ
ಕನ್ನಡತಿ ಮುಡಿದಿಹಳು
ಸೌಂದರ್ಯಕೇಂದ್ರ...
ಸಾವಿರನಿಹಾರಿಕೆಗು
ಭೂಷಣದಿ ಮೆರೆದಿಹುದು
ಕನ್ನಡದ ಚಂದ್ರ..
ಕವಿಕಿರಣಗಣದಿಂದ
ಲಾಲಿತ್ಯಚಂದ್ರಿಕೆಯ
ಹೊಮ್ಮಿಸಿದ ಚಂದ್ರ..
ಬುಧನೈದಿಲೆಯು ಹರವಿ
ಸುಧೆಯೊಳಗೆ ಸಂಭ್ರಮಿಸಿ
ಆನಂದಸಾಂದ್ರ..
ತಾಯಿ ಉಣಿಸಿದ ಮೊದಲ
ತುತ್ತಿನಲು, ಮುತ್ತಿನಲು
ಆಹ್ಲಾದಚಂದ್ರ..
ವದನದಂಗಳದಲ್ಲಿ
ಗೆಳೆಯರಾಟದಿ ಬೆಳೆದ
ಬೃಂದಾವನೇಂದ್ರ...||
ಕೆಡುಕುತಿಮಿರವ ಸೀಳಿ
ಚಿತ್ತಭಿತ್ತಿಯ ಪೂರ್ತಿ
ಧವಲಿಸಿದ ಚಂದ್ರ..
ಕ್ಷಣಕೂ ಸಂಸ್ಕೃತಿಹಾದಿ
ಮಾಧುರ್ಯನಾದವನು
ಮೀಟಿಹುದು ಮಂದ್ರ..||
ಚಿತ್ರಕೃಪೆ-ಅಂತರ್ಜಾಲ
ವಾವ್ ಎಂತಹ ಕನ್ನಡ ಪ್ರೀತಿಯ ಹಾಡು.
ReplyDeleteಆಹ್ಲಾದಚಂದ್ರ.. ಅಮೋಘ ಪದ ಲಾಲಿತ್ಯ ಪ್ರಸ್ತುತಿ.