ಕನವರಿಕೆ
ರಮಿಸು ಕುಳಿತು ಬಳಿಗೆ..
ರಮಿಸು ಕುಳಿತು ಬಳಿಗೆ..
ಕುಡಿಯಲ್ಲೇ ಹೊಳೆವ ದೀವಿಗೆ..!!
ಮುಂಗುರುಳ ಚಾಮರದಲಿ ತಂಗಾಳಿಯ,
ಬೀಸಿರಲು ಚಂದ್ರ ತಂದ ಮಧುಪ್ರೀತಿಯ..
ತಾರೆಗಳ ಮೀರಿ ಮುತ್ತು ಮಣಿಮಾಲೆಯ,
ಹೆಣೆದಿಡುತಲಿ ಧರಿಸಿದೆ ಸುಹೃದಯ..!!
ಕನಸೂರ ರಾಜಕುವರಿ ಈ ಪ್ರೇಯಸಿ..
ಕನ್ನಡಿಯೂ ಹಾತೊರೆಯುವ ಅತಿರೂಪಸಿ,
ನಲ್ನುಡಿಯ ಹೂವಿನಿಂದ ಕ್ಷಣ ಮೋಹಿಸಿ,
ಬಾನಾಡಿ ನೀ ನನ್ನೆದೆ ತೇಲಿಸಿ..!!
ಹೊಂಬಿಸಿಲ ಸೌಮ್ಯತನದ ಅನುಭಾವವ
ಮೀರಿಸುವ ನಿನ್ನ ಬೆರಳ ಈ ಮಾರ್ದವ..
ಸ್ಪರ್ಶಿಸಲು ನೂತ್ನ ಉದಯ, ಋತುವೈಭವ
ಕನವರಿಕೆಗೂ ತುಂಬಿಸು ಜೀವವ..!!
ವಾಹ್. ! ಒಂದು ಹಿಡಿಯಷ್ಟು ನಕ್ಷತ್ರಗಳನ್ನು ನಿಮಗೆ ಉಡುಗೊರೆ ಕೊಡಬೇಕೆನಿಸಿತು.ಕಾಯಿಸಿ , ಮತ್ತೊಮ್ಮೆ ಕಾಯಿಸಿ ಚಿನ್ನವನ್ನು ಎರಕ ಒಯ್ದಂತಿದೆ. ಚಿಕ್ಕೆಗಳು - ಚಂದ್ರ ಭುವಿಗೆ ಬಂದು ಚಿಕ್ಕೆಯಾಟ ಆಡಿದಂತಿದೆ ಕವಿತೆ. ಸಮರ್ಥ ಪದ, ಕಾವ್ಯ ಲಯ ಸುಂದರ , ಅತೀ ಸುಂದರ. ಅಭಿನಂದನೆಗಳು ಪುರೋಹಿತರೆ.
ReplyDeleteಅಂತರಂಗ ಮೃದಂಗ ಬಲು ಸೊಗಸಾದ ನಾದ ಹೊರಹೊಮ್ಮಿಸಿದೆ.. ಪದಗಳೇ ಎದ್ದು ಎದ್ದು ಎದೆಯಲ್ಲಿ ಕುಣಿದಾಡಿದೆ.. ಸಂಗೀತವಿಲ್ಲದೆ ತಲೆಯು ತಾಳಕ್ಕೆ ತುಗಾಡಿಸುವಂತೆ
ReplyDeleteಓದುವಾಗ ರೋಮಾಂಚನ ಅನುಭವ.. ಅತ್ಯದ್ಬುತ ಕವನ .. ಹಾಡಲು ಮನಸ್ಸು ಕೂಗುತ್ತಿದೆ.. :)
ಸರಸಮಯ ಸುಲಲಿತ ಕಾವ್ಯ ಪ್ರಯೋಗ.
ReplyDeleteಗೆಳೆಯ ಮನಗೆದ್ದಿತು.
ನನ್ನ ಬ್ಲಾಗಿಗೂ ನಿಮಗೆ ಸ್ವಾಗತ, ಅಲ್ಲಿ ಒಂದು ಹೊಸ ನದಿಯ ಕವನವಿದೆ.
kaavyagonchalu.. tandantide namagu hanchalu... Chendavide..
ReplyDeleteಅತ್ಯುನ್ನತ ಭಾವ ಲಹರಿ..
ReplyDelete