( "ಗಾಳಿಪಟ" ಚಿತ್ರದ, "ಮಿಂಚಾಗಿ ನೀನು ಬರಲು, ನಿಂತಲ್ಲಿಯೇ ಮಳೆಗಾಲ.." ಎಂಬ ಹಾಡಿನ ರಾಗದಲ್ಲಿ ಬರೆದ ನೂತನ ಸಾಹಿತ್ಯ..)
ಮೋಹದ ಉದಯಕೆ ಇಂದು,ಕರಗಿದ ಇಬ್ಬನಿ ನಾನು..
ಸ್ನೇಹದ ಕಣ್ಣೊಳಗೆಂದೂ ಹೊರಳುವ ಕಂಬನಿ ನಾನು
ದಾಹದ ಕರೆಗೆ ಬಂದು ಒಲಿದ ಸುಧೆಯ ಹನಿ ನೀನುನೀನಿರದೆ ಇರದು ಬೇರೇನೂ...||
ಮೋಹದ ಉದಯಕೆ ಇಂದು,ಕರಗಿದ ಇಬ್ಬನಿ ನಾನು....
ನೀ ಜೀವನೌಕೆಗೆ ಕಡಲದೀಪವು..
ನಿನ್ನ ಪ್ರೀತಿಬೆಳಕಲೇ ನನ್ನೀ ಯಾನವು..
ಈ ಕ್ಷಣದಿ ಮೂಡಿದೆ ಪ್ರಣಯಚಿತ್ರವು..
ನಿನ್ನ ನೆನಪು ಸೋಕಲು, ನೂರು ವರ್ಣವು..
ಕನಸಿನ ರೂಪಸಿ....ಕಾಡದೆ ಕಾಯಿಸಿ.....
ಸಹಿಯ ನೀಡು, ಮನಕೆ ಬರಲು, ನಗೆಯ ಹಾಸಿ.....||1||
ಮೋಹದ ಉದಯಕೆ ಇಂದು,ಕರಗಿದ ಇಬ್ಬನಿ ನಾನು..
ಸ್ನೇಹದ ಕಣ್ಣೊಳಗೆಂದೂ ಹೊರಳುವ ಕಂಬನಿ ನಾನು...
ನಿನ್ನ ಹೃದಯ ಮಿಡಿದು ಉಲಿವ ಪ್ರೀತಿಪಿಸುಮಾತು ಮುರಳಿ..
ನನ್ನ ಕಡೆಗೆ ಬೀಸಿಬಂತು, ಒಲವಿನ ಹಸಿಕಂಪು ಅರಳಿ..
ಕದಲಿಸಿ ಕಣ್ಣನೆ......ಕದಡಿದೆ ಭಾವನೆ.......
ಬಿಗಿದು ತಬ್ಬಿ, ಬಿಡದೆ ನನ್ನ ರಮಿಸು ನೀನೇ.....||೨||
ಮೋಹದ ಉದಯಕೆ ಇಂದು,ಕರಗಿದ ಇಬ್ಬನಿ ನಾನು..
ಸ್ನೇಹದ ಕಣ್ಣೊಳಗೆಂದೂ ಹೊರಳುವ ಕಂಬನಿ ನಾನು
ದಾಹದ ಕರೆಗೆ ಬಂದು ಒಲಿದ ಸುಧೆಯ ಹನಿ ನೀನು
ನೀನಿರದೆ ಇರದು ಬೇರೇನೂ...||
ಭೀಮಣ್ಣ ಮೂಲ ಸಾಹಿತ್ಯಕ್ಕಿಂತಲೂ ಈ ಗೀತೆ ನನ್ನ ಮನ ಮೆಚ್ಚಿತು.
ReplyDeleteನನ್ನ ಬ್ಲಾಗಿಗೂ ಸ್ವಾಗತ.
ತುಂಬಾ ಧನ್ಯವಾದಗಳು ಬದರಿ ಸರ್..
Deleteನಿಮ್ಮ ಬ್ಲಾಗಿಗೆ ಖಂಡಿತ ಭೇಟಿ ನೀಡುತ್ತೇನೆ..
ಆಹಾ....ಬಲು ಸೊಗಸಾಗಿದೆ ಸರ್...
ReplyDelete