[ ಈ ಹಾಡು, "ರೋಮಿಯೋ" ಚಿತ್ರದ, "ಆಲೋಚನೆ..ಆರಾಧನೆ..ಎಲ್ಲ ನಿಂದೇನೆ.." ಎಂಬ ಹಾಡಿನ ಧಾಟಿಯಲ್ಲಿ ಬರೆದ ಹೊಸ ಸಾಹಿತ್ಯ..]
ಈ ಸುಂದರ ಹೂಹಂದರ ಬಂತು ಬಾನಿಂದ..
ಪ್ರೇಮಾತುರ ಈ ಕಾತರ ಕಂಡೆ ನಿನ್ನಿಂದ..
ಸಂವಾದದಿ ಸಂತೋಷದ ಸಂಗಮ..
ನಿನ್ನಾಸೆಯೇ ನನ್ನ ಖುಷಿ ಅಂತಿಮ..
ಬದುಕಿಗೊಂದು ಸಿಹಿಯ ಸಾಲು ತಂದು,
ಪ್ರಣಯದಲ್ಲಿ ಧನ್ಯನಾದೆ ಮಿಂದು,
ನೀನೇ ಸುಧೆಯ ಸಿಂಧು...||
ಈ ಸುಂದರ ಹೂಹಂದರ ಬಂತು ಬಾನಿಂದ..
ಪ್ರೇಮಾತುರ ಈ ಕಾತರ ಕಂಡೆ ನಿನ್ನಿಂದ..
ಕಣ್ಣಿನಲ್ಲಿ ನಿನ್ನ ರೂಪ ಅಗಣಿತ
ನಿಂತ ಮೇಲೆ ನನ್ನ ಭಾವ ವಿಚಲಿತ..
ಬಿಡದಲೇ ನೋಡಿ, ಕರಗಿಸು ನನ್ನೀ ಮನ
ನಿನ್ನ ಮಂದಹಾಸ ಕಾಂತಿ ನೆನೆಯುತ
ಮೌನದೊಂದು ಭಾಷೆಯನ್ನು ಕಲಿಯುತ..
ಅನುಭವಕೀಗ, ಅರಿಯದ ರೋಮಾಂಚನ..||
ಕೇಳು.. ಒಮ್ಮೆ,, ಈ ಗೀತೆಯ..
ಹೇಳು.. ಮತ್ತೆ.. ಈ ಪ್ರೀತಿಯ..||1||
ಈ ಸುಂದರ ಹೂಹಂದರ ಬಂತು ಬಾನಿಂದ..
ಪ್ರೇಮಾತುರ ಈ ಕಾತರ ಕಂಡೆ ನಿನ್ನಿಂದ..
ಸಣ್ಣದಾದ ಮಾತು ಕೂಡ ಸುಮಧುರ
ಬೇಗ ಹಂಚಬೇಕು ಎಂಬ ಅವಸರ
ಪ್ರತಿದಿನ ಹೀಗೆ, ಒಲವಲಿ ಮಾಮೂಲಿಯೇ..
ನಿನ್ನ ಗುಂಗಿನಲ್ಲಿ ಇಂದು ಪ್ರತಿಸ್ವರ
ಹಾಡಿದಂತೆ ಭಾಸವೆಲ್ಲ ಪರಿಸರ
ಹೃದಯದ ದಾರಿ.. ಬೆರೆತಿದೆ ನಿನ್ನಲ್ಲಿಯೇ..
ಏನೋ..ನವ್ಯ.. ಈ ಉತ್ಸವ..
ಎಷ್ಟು..ಭವ್ಯ..ಈ ವೈಭವ...||2||
ಈ ಸುಂದರ ಹೂಹಂದರ ಬಂತು ಬಾನಿಂದ..
ಪ್ರೇಮಾತುರ ಈ ಕಾತರ ಕಂಡೆ ನಿನ್ನಿಂದ....
ಈ ಸುಂದರ ಹೂಹಂದರ ಬಂತು ಬಾನಿಂದ..
ಪ್ರೇಮಾತುರ ಈ ಕಾತರ ಕಂಡೆ ನಿನ್ನಿಂದ..
ಸಂವಾದದಿ ಸಂತೋಷದ ಸಂಗಮ..
ನಿನ್ನಾಸೆಯೇ ನನ್ನ ಖುಷಿ ಅಂತಿಮ..
ಬದುಕಿಗೊಂದು ಸಿಹಿಯ ಸಾಲು ತಂದು,
ಪ್ರಣಯದಲ್ಲಿ ಧನ್ಯನಾದೆ ಮಿಂದು,
ನೀನೇ ಸುಧೆಯ ಸಿಂಧು...||
ಈ ಸುಂದರ ಹೂಹಂದರ ಬಂತು ಬಾನಿಂದ..
ಪ್ರೇಮಾತುರ ಈ ಕಾತರ ಕಂಡೆ ನಿನ್ನಿಂದ..
ಕಣ್ಣಿನಲ್ಲಿ ನಿನ್ನ ರೂಪ ಅಗಣಿತ
ನಿಂತ ಮೇಲೆ ನನ್ನ ಭಾವ ವಿಚಲಿತ..
ಬಿಡದಲೇ ನೋಡಿ, ಕರಗಿಸು ನನ್ನೀ ಮನ
ನಿನ್ನ ಮಂದಹಾಸ ಕಾಂತಿ ನೆನೆಯುತ
ಮೌನದೊಂದು ಭಾಷೆಯನ್ನು ಕಲಿಯುತ..
ಅನುಭವಕೀಗ, ಅರಿಯದ ರೋಮಾಂಚನ..||
ಕೇಳು.. ಒಮ್ಮೆ,, ಈ ಗೀತೆಯ..
ಹೇಳು.. ಮತ್ತೆ.. ಈ ಪ್ರೀತಿಯ..||1||
ಈ ಸುಂದರ ಹೂಹಂದರ ಬಂತು ಬಾನಿಂದ..
ಪ್ರೇಮಾತುರ ಈ ಕಾತರ ಕಂಡೆ ನಿನ್ನಿಂದ..
ಸಣ್ಣದಾದ ಮಾತು ಕೂಡ ಸುಮಧುರ
ಬೇಗ ಹಂಚಬೇಕು ಎಂಬ ಅವಸರ
ಪ್ರತಿದಿನ ಹೀಗೆ, ಒಲವಲಿ ಮಾಮೂಲಿಯೇ..
ನಿನ್ನ ಗುಂಗಿನಲ್ಲಿ ಇಂದು ಪ್ರತಿಸ್ವರ
ಹಾಡಿದಂತೆ ಭಾಸವೆಲ್ಲ ಪರಿಸರ
ಹೃದಯದ ದಾರಿ.. ಬೆರೆತಿದೆ ನಿನ್ನಲ್ಲಿಯೇ..
ಏನೋ..ನವ್ಯ.. ಈ ಉತ್ಸವ..
ಎಷ್ಟು..ಭವ್ಯ..ಈ ವೈಭವ...||2||
ಈ ಸುಂದರ ಹೂಹಂದರ ಬಂತು ಬಾನಿಂದ..
ಪ್ರೇಮಾತುರ ಈ ಕಾತರ ಕಂಡೆ ನಿನ್ನಿಂದ....
ಚೆನ್ನಾಗಿದೆ...ಒಮ್ಮೆ ಓದಿ ,ಮತ್ತೆ ಮತ್ತೆ ಹಾಡಿದೆ ... :-)
ReplyDeleteಭಾವಗಳು ಮೂಲಕ್ಕಿಂತ ಚೆನ್ನಾಗಿವೆ.
ReplyDeleteಲಯ ಸರಿಯಾಗಿ ಒಗ್ಗಿತು.