Sunday, June 24, 2012

ಕೆರೆಯ ತೀರ..!!


[ ಕೆಲ ದಿನಗಳ ಹಿಂದೆ, ಸ್ನೇಹಿತರೆಲ್ಲ ಸೇರಿ ವಿಹಾರಕ್ಕೆಂದು ಹತ್ತಿರದ ಕೆರೆಗೆ ಹೋಗಿದ್ದೆವು..
ಅಲ್ಲಿನ ಆ ಆಹ್ಲಾದಕರ ವಾತಾವರಣದಲ್ಲಿ, ಗೆಳೆಯರೆಲ್ಲ ಕವನವೊಂದನ್ನು ಬರೆಯಲು ಹೇಳಿದಾಗ, ಬರೆದ ಕವನವಿದು..]


               


ನೀರತೆರೆಗಳ ಧ್ವಾನದಲ್ಲಿಯೂ, ನಿನ್ನ ಹೆಸರಿನ ಇಂಪಿದೆ..
ತಂಪು ವಾಯುವಿನೋಕುಳಿಯಲು, ಮೌನದುಸಿರಿನ ಕಂಪಿದೆ..||


ಸಾಲುಮರಗಳ ಎಲೆಯ ಮರೆಯಲಿ, ಮಂದಹಾಸದ ಹೂವಿದೆ..
ಕೆರೆಯ ತೀರದ ಶೀತಲತೆಯಲೂ, ನಿನ್ನ ನೆನಪಿನ ಕಾವಿದೆ..||


ಬಾನಿನಲಿ ಚಿತ್ತಾರ ಮೂಡಿಸಿ, ಹೊರಟ ಹಕ್ಕಿಯ ವೃಂದದಿ..
ಮೊಗದ ರೇಖಾಚಿತ್ರ ಕಂಡೆನು, ಸಂಜೆಗೆಂಪಿನ ವರ್ಣದಿ..||



ಎಳೆಯ ಹುಲ್ಲಿನ ಎಸಳು ಒಮ್ಮೆಲೇ, ತೂಗಿರಲು ವೈಯ್ಯಾರದಿ..
ಮೋಹಕುಂತಲ ಸೋಕಿ ಕೆನ್ನೆಗೆ, ಇಂದ್ರಜಾಲದ ವಾರಿಧಿ..||

ನಡೆವ ಹೆಜ್ಜೆಯೂ, ಇಣುಕಿ ನೋಡಿದೆ, ಚಡಪಡಿಸಿ ನಿನ್ನೂರಿಗೆ..
ದಡದ ಆಚೆಯೂ, ನೋಟ ಚಾಚಿದೆ, ಗಮ್ಯ ಯಾವುದು ದಾರಿಗೆ.?


ಸ್ವಪ್ನಬುತ್ತಿಯ ಹೊತ್ತು ತಂದಿಹೆ, ಹಂಚಲೋಸುಗ ನಿನ್ನಲೇ..
ಬಂದು ಬೇಗನೆ ತುತ್ತು ನೀಡುತ, ಬಾಚಿ ತಬ್ಬಿಕೋ ಕಣ್ಣಲೆ..||

4 comments:

  1. ತುಂಬಾ ಚೆನ್ನಾಗಿ ಬರೆದಿದ್ದೀರಿ.
    ಸ್ವರ್ಣಾ

    ReplyDelete
  2. ತುಂಬಾ ಚನ್ನಾಗಿದೆ, ನಿಮ್ಮ ಭಾವಕ್ಕೆ ಪದಗಳ ಜೋಡಣೆ ಮಾಡುವಾಗ ಪ್ರಾಸಕ್ಕೆ ಗಂಟು ಬೀಳದಿದ್ದರೇ ಈ ಪದ್ಯ ಇನ್ನೂ ಸುಂದರವಾಗಿ ಹರಿಯುತ್ತಿತ್ತು ಎನಿಸುತ್ತಿದೆ.

    ReplyDelete
  3. ಕಾವ್ಯ ಸೃಷ್ಟಿಯಲ್ಲಿ ಸೋಜಿಗವನ್ನದ್ದಿ ಬರೆಯುವ ಕವಿ ಭೀಮಸೇನ. ಇಲ್ಲೂ ಅದರ ಮುಂದುವರಿಕೆಯು ನಮಗೆ ಅಚ್ಚರಿಯನ್ನು ಮೂಡಿಸುತ್ತದೆ.

    ನನ್ನ ಬ್ಲಾಗಿಗೂ ಬನ್ನಿರಿ.

    ReplyDelete
  4. ಭೀಮಸೇನರ ಕಾವ್ಯಪಾಕ.. ಓದುಗರಿಗೆ ರಸದೌತಣ :-)

    ReplyDelete