ಭಾವ ಲಾಸ್ಯ..!!!!!
ನನ್ನ ಎದೆಯ ವೀಣೆಯಲ್ಲಿ, ಮೀಟಿದೊಂದು ಭಾವಕೆ
ಮಿಡಿದಳೀ ಅಭಿಸಾರಿಕೆ..
ನಯನಪುಷ್ಪ ಪೋಣಿಸಿರಲು, ಮೂಡಿದೊಲವಮಾಲಿಕೆ
ಕೊರಳಪದಕ ಸೋಲಿಗೆ..
ಕಲೆಯ ಶಿಲ್ಪ ಉಸಿರು ತಂದು, ಉಸುರಿದಂಥ ಹೆಸರು ನೀನು
ಬೆಳೆದ ಹಸಿರು ಪೈರು ಎಸೆದ, ಎಸೆವ ಕಂಪಿನಾಕೆ ನೀನು..
ದೂರದೃಶ್ಯ ಕ್ಷೀರಪಥದಿ ಮೆರೆವ ತಾರೆಗಳ ಕುಂಚ,
ಬಿಡಿಸಿ ತಂದ ರೂಪವೀಗ, ಮನದಿ ವ್ಯಾಪ್ತ ಬಿಡದೆ ಕೊಂಚ..||
ಝರಿಯ ಒಡಲ ರವದಿ ಬಂತು, ಹೂವುನಡೆಯ ಮೃದುಲತಾಳ
ಕಿವಿಯ ಮೀನು ತೇಲಿ ಇಂದು, ಕಲಕಿತೀಗ ಮನತಿಳಿಗೊಳ..
ನಗೆಯ ಸೂರ್ಯ ಮೇರೆ ಮೀರೆ, ಕಬ್ಬುಸಿಹಿಯ ಸಂಕ್ರಾಂತಿ,
ನಿನ್ನ ನೆನಪೇ ಪ್ರವಹಿಸಿರಲು, ಕನಸಿಗೆಲ್ಲಿಯ ವಿಶ್ರಾಂತಿ..!!!

ಇದನ್ನು ಓದಿದ ಆಕೆ ಕೊಡುವ ಸಿಹಿ ಮುತ್ತಿದೆಯಲ್ಲಾ ಗೆಳೆಯ! ಅದು,
ReplyDeleteಅವರ್ಣನಿಯ್ ಆನಂದ ಕ್ಷಣ....
ಹ್ಹ ಹ್ಹ.. ತುಂಬಾ ಧನ್ಯವಾದಗಳು ಬದರಿನಾಥ್ ಸರ್..
ReplyDelete