ಆಂತರ್ಯ
ಎದೆಯ ಭಾವದ ಲೋಕ,
ಅವಳ ಸ್ಪರ್ಶದಿ ನಾಕ.,
ಸಿಂಗರಿಸಿ ಸಂಭ್ರಮಿಪ, ಉತ್ಸವವಿದು..
ಹೃದಯಮಂಟಪ ದೈವ,
ಕರುಣಿಸಿಹಳೀ ಒಲವ,
ತಪ್ತ ಮನಸಿನ, ಪ್ರೇಮಪೂಜೆಗೊಲಿದು...
ನದಿದಡದ ತುಸು ಗಾಳಿ,
ಬರುತಲಿಹುದಲೆ ತೇಲಿ,
ನಿನ್ನ ಕಾಲ್ಗೆಜ್ಜೆ ದನಿ ; ಪ್ರಣಯ ಕವನ..
ಬಾಹುವಿನ ಬಂಧನಕೆ,
ತೆರೆದು ಹಾರಿದೆ ಬಯಕೆ.,
ನಿನ್ನೊಲುಮೆ ಗೂಡೆನ್ನ, ಭವ್ಯಭವನ...
ಕಾಲ ಹೊರಳಲು ಸಹಜ,
ದೊರೆತ ಭಾಗ್ಯದ ಖನಿಜ.,
ಕಡಲ ಗರ್ಭದ ಮುತ್ತು-ರತ್ನದಂತೆ..
ಯಾವ ದಾರಿಯ ಬಳಸಿ,
ಬಂದೆ ನೀ ನನ್ನರಸಿ !
ಸ್ವಪ್ನ-ಚಲನೆಯು ಮೀನಹೆಜ್ಜೆಯಂತೆ...
ಸ್ವಪ್ನ-ಚಲನೆಯಾದರೂ ನಿಚ್ಚಳವಾಗಿ ಎದುರಿಗೆ ಬಂದಂತೆ ಭಾಸವಾಗುವಂತೆ ಬರೆವ ನಿಮ್ಮ ಶೈಲಿ ಅತ್ಯದ್ಭುತ. ಬರವಣಿಗೆಯಲಿ ಭೀಮ ಭಾವನೆಯಲಿ ಕಾಮ ( ಮನ್ಮಥ)
ReplyDeleteಆಂತರ್ಯದ ಗುಡಿಯಲ್ಲಿ ಒಲವ ಮಂತ್ರ. ಕಿವಿಯರಳಬೇಕು ಕವಿ ಕಟ್ಟಿದ ಪದಪುಂಜಗಳಿಗೆ. ಅತ್ಯುತ್ತಮ ಪ್ರಸ್ತುತಿ ಭೀಮಸೇನರೆ.
ReplyDelete