Sunday, May 1, 2011

( ಈ ಹಾಡು " ಕೃಷ್ಣನ್ ಲವ್ ಸ್ಟೋರಿ " ಚಿತ್ರದ  " ಸಂತೆಯಲ್ಲೇ ನಿಂತರೂನು " ಎಂಬ ಹಾಡಿನ ರಾಗದಲ್ಲಿ ಬರೆದ ಹೊಸ ಸಾಹಿತ್ಯ ..)        
          
          ನಲ್ಲೆ ನಿನ್ನ ಕಣ್ಣಿನಲ್ಲೇ ....
          ನಲ್ಲೆ ನಿನ್ನ ಕಣ್ಣಿನಲ್ಲೇ ಕಂಡೆ ಈಗ ನನ್ನನ್ನೇ..
          ನಿನ್ನ ಹಾಗೆ ಯಾರು ಇಲ್ಲ, ಮೆಚ್ಚಿಕೊಂಡೆ ನಿನ್ನನ್ನೇ..
          ಒಂದೇ ಸಾರಿ ನೋಡಿ ಈಗ ನನ್ನ ತುಂಬಾ,
          ತುಂಬಿಕೊಂಡೆ ನಿನ್ನನ್ನೇ..
          ಒಪ್ಪಿಕೊಂಡೆ ನಿನ್ನನ್ನೇ..
          ನೀನೂ ಅಪ್ಪಿಬಿಡು ನನ್ನನ್ನೇ.....

          ಪ್ರಣಯವೇ ತಣಿಸಿದೆ ನನ್ನನೇ..
          ನೆನೆಯುತ ಪ್ರತಿಕ್ಷಣ ನಿನ್ನನೇ..

          ಎದೆಯಲಿ ನಿನ್ನಯ .. ನಡೆ ನುಡಿ ತುಂಬಿದೆ ..
          ಒಲವಿನ ನಾದವೇ ಈ, ಉಸಿರಲಿ ಹೊಮ್ಮಿದೆ...||

          ಪ್ರಣಯವೇ ತಣಿಸಿದೆ ನನ್ನನೇ... ನೆನೆಯುತ ಪ್ರತಿಕ್ಷಣ ನಿನ್ನನೇ..|

          ನೋಟದಲೆ.. ಬಂಧಿಸುವ.. ಪ್ರೀತಿಯಿದು ಹೀಗೆ ..
          ತೋಟದಲಿ .. ಗಂಧಿಸುವ .. ಹೂವುಗಳ ಹಾಗೆ ..
               ನಿನ್ನಯ.. ಭೇಟಿಗೆ.. ಕಾದಿಹೆ.. ನಾನು..
               ಕಾಡದೆ.. ಕೂಡಲೇ.. ಸೇರುಬಾ.. ಇನ್ನು..
               ನೀನೆ ಇರುವಲ್ಲಿ... ಬೇರೆ ಬೇಕೇನು..?! ||೧||

          ಪ್ರಣಯವೇ.....
          ಪ್ರಣಯವೇ ತಣಿಸಿದೆ ನನ್ನನೇ... ನೆನೆಯುತ ಪ್ರತಿಕ್ಷಣ ನಿನ್ನನೇ..| 
     
          ಮಾನಸದ.. ಮಂದಿರದ.. ಭಾವಗಳು ಸೇರಿ...
          ಆಗಸದ.. ಚಂದಿರನ .. ಮೀರುತಿವೆ ಹಾರಿ..
             ನನ್ನಯ.. ದೇಹಕೆ.. ಜೀವ ನೀನಿಂದು..
             ಪ್ರೀತಿಯ.. ಯಾನಕೆ.. ನಾವೆ ಆಗಿಂದು..
             ಸುತ್ತುವ.. ಕೂಡಿ.. ಭೂಮಿ ಮೇಲಿಂದು....||೨||

          ಪ್ರಣಯವೇ.......
          ಪ್ರಣಯವೇ ತಣಿಸಿದೆ ನನ್ನನೇ... ನೆನೆಯುತ ಪ್ರತಿಕ್ಷಣ ನಿನ್ನನೇ..| 
          ಎದೆಯಲಿ ನಿನ್ನಯ .. ನಡೆ ನುಡಿ ತುಂಬಿದೆ ..
          ಒಲವಿನ ನಾದವೇ ಈ, ಉಸಿರಲಿ ಹೊಮ್ಮಿದೆ...||||

No comments:

Post a Comment