Wednesday, October 26, 2011

( ಈ ಹಾಡು, "ಜಾನಿ ಮೇರಾ ನಾಮ್-ಪ್ರೀತಿ ಮೇರಾ ಕಾಮ್" ಚಿತ್ರದ, "ಯಾವ ಸೀಮೆಯ ಮಾಯಗಾತಿಯೇ.." ಎಂಬ ಹಾಡಿನ ಧಾಟಿಯಲ್ಲಿ ಬರೆದ ಹೊಸ ಸಾಹಿತ್ಯ..)

ಪ್ರೇಮಗೀತೆಯ ರೂಪರೇಖೆ ನೀ,
ನನ್ನ ಮುನ್ನುಡಿ.. ಇನ್ನು ಮುನ್ನಡಿ..
ಕ್ಷೇಮವಾರ್ತೆಯ ನಿತ್ಯನೌಕೆ ನೀ,
ನಿನ್ನ ಕಣ್ಣಡಿ.. ಮೋಹಗನ್ನಡಿ..
ನನ್ನೊಮ್ಮೆ ಮರೆಸುತಾ ನಿಂತೆ ರಮಿಸುತಾ ರಾಗಿಣಿ..
ಮತ್ತೊಮ್ಮೆ ಸೆಳೆಯುತಾ ಬಂದೆ ಹೊಳೆಯುತಾ ರೋಹಿಣೀ..||

ಪ್ರೇಮಗೀತೆಯ ರೂಪರೇಖೆ ನೀ..........

ಮಾತಲೇ, ತೀರದ ತಂಪು ಕಂಪೆರೆವೆ ನೀನು..
ಮೌನದ ಕಡಲಲೂ ಮುತ್ತು ಕಟ್ಟಿರುವೆಯೇನು.?!!
ಭಾವರಾಶಿಯಿಂದ ಇಂದು,ಮೂರ್ತಿವೆತ್ತ ಕಿನ್ನರಿ..
ನಿನ್ನ ಸ್ವಪ್ನ ಕಂಡ ಮೇಲೆ, ಮತ್ತ ಈ ಪರಿ..
ಜಿನುಗಿಬಾ.... ಭರಿಸಲು.. ಎದೆಯನು..||೧||


ಪ್ರೇಮಗೀತೆಯ ರೂಪರೇಖೆ ನೀ,
ನನ್ನ ಮುನ್ನುಡಿ.. ಇನ್ನು ಮುನ್ನಡಿ....

ಅಂದದಿ ಗೋಚರ, ನೂರು ಹೊಂಬಣ್ಣ ಸಾಲು..
ಮುಂದಿನ ಈ ಸ್ವರ, ನೀಡು ನನಗೊಂದು ಪಾಲು..
ಸ್ಪರ್ಶದಲ್ಲೇ ಜೀವ ಧನ್ಯ, ನೀನು ಬಾನಿನ ನದಿ..
ಚಿತ್ತದಲ್ಲೇ ದೃಶ್ಯವಾದ, ಸುಧಾಕೌಮುದಿ..
ಗುನುಗಿಹೆ.... ಅನುದಿನ.. ಒಲವನು..||೨||

ಪ್ರೇಮಗೀತೆಯ ರೂಪರೇಖೆ ನೀ,
ನನ್ನ ಮುನ್ನುಡಿ.. ಇನ್ನು ಮುನ್ನಡಿ..
ಕ್ಷೇಮವಾರ್ತೆಯ ನಿತ್ಯನೌಕೆ ನೀ,
ನಿನ್ನ ಕಣ್ಣಡಿ.. ಮೋಹಗನ್ನಡಿ..
ನನ್ನೊಮ್ಮೆ ಮರೆಸುತಾ ನಿಂತೆ ರಮಿಸುತಾ ರಾಗಿಣಿ..
ಮತ್ತೊಮ್ಮೆ ಸೆಳೆಯುತಾ ಬಂದೆ ಹೊಳೆಯುತಾ ರೋಹಿಣೀ..||

1 comment:

  1. ಅಣಕು ಹಾಡುಗಳೂ ಅನ್ನುವುದಕ್ಕಿಂತ ಸಂಗೀತ ನಿರ್ದೆಶಕರ ಸ್ವರಸಂಯೋಜನಗೆ ಬರೆದ ಎರಡನೇ ಸಾಹಿತ್ಯ ರಚನೆ ಅನ್ನಬಹುದು. ಕೆಲ ಸಾಹಾತ್ಯಿಕ ಅಂಶಗಳು ಮೂಲ ಗೀತೆಗಿಂತ ಪಕ್ವವಾಗಿದೆ. ಉದಾ :
    "ಚಿತ್ತದಲ್ಲೇ ದೃಶ್ಯವಾದ, ಸುಧಾಕೌಮುದಿ.."

    ಇದು ಬ್ಲಾಗ್ ಲೋಕದ ವಿಭಿನ್ನ ಪ್ರಯತ್ನ. ನೀವು ಬಹುಬೇಗ ಸಿನಿಮಾ ಸಾಹಿತಿ ಆಗಿರಿ.

    ReplyDelete