Saturday, February 25, 2012

ಸಾರ್ಥಕ್ಯ

ಗಿರಿಯ ಮಡಿಲಲಿ ಹರಿವ
ಝರಿಯಾಗುವ ಬಯಕೆ..
ಕರುಣಿಸೀಗಲೇ ವಿಧಿಯೇ
ಹರಸೆನ್ನ ಮನಕೆ..!!


ಬಳಲಿದ್ದ ತರುಮೃಗಾ-
ವಳಿಗೆ ತಂಪೆರೆದು ಒಡ-
ಲೊಳಗಿನ ಜೀವತತಿಗಮೃತಗರೆದು..
ಸೆಳೆದು ಸಹಗಾಮಿಗಳ 
ಬೆಳೆದು ಒಂದಾಗಿ ಮಹ-
ಹೊಳೆಯ ಸೇರ್ಪೆನು ಉತ್ತಮತೆಯನ್ನು ಪಡೆದು...||


ಮೇದಿನಿಯ ಮೇಲೆಲ್ಲ
ಹಾದಿ ದುರ್ಗಮವಿರಲಿ 
ಭೇದಿಸುತ ಅಡೆತಡೆಯ ಮುನ್ನಡೆವೆ ಹೀಗೆ..
ಖೇದ ತಾಳದೆ ಇನಿತು
ಮೋದವೀಯುತ ಜಗಕೆ 
ಸಾಧನೆಯ ಪಯಣದೀ ಸಾರ್ಥಕತೆ ಸಾಕೆನಗೆ..||



2 comments:

  1. ಅರ್ಪಣಾ ಭಾವ ಮತ್ತು ಪ್ರಾರ್ಥನಾ ಗೀತೆ. ತುಂಬಾ ಮನಸ್ಸಿಗೆ ಹಿಡಿಸಿತು. ಹರಿಹರದ ತುಂಗೆಯ ಮಡಿಲಂತೆ ನಿಮ್ಮ ಮನಸ್ಸೂ ನಿಷ್ಕಲ್ಮಶ ಕೋಮಲ...

    ReplyDelete
  2. ಅಬ್ಬಬಬ್ಬಾ .. ಅತ್ಯದ್ಭುತ ಭಾವಪೂರ್ಣ ಕವಿತೆ.. ಭೀಮಸೇನ್ .. :)
    ಇದೇ ಭಾವನೆಯಲ್ಲಿ ಹರಿಯುವ ನೀರಿನ ವರ್ಣನೆ ಮಾಡುತ್ತಾ ನಾವು ಒಂದು ಕವನ ಬರೆದಿದ್ದೆವು .. "ಜಲಧಾರೆ" ಎಂಬ ಶೀರ್ಷಿಕೆಯಲ್ಲಿ .. ಆದರೆ ನಿಮ್ಮ ಈ ಕವನ ಮನಸ್ಸಿನ ಬಯಕೆಗಳ ವಿಭಿನ್ನ ಅವತಾರ ತೋರಿಸುತ .. ಪದ ಪದಗಳ ವಿಸ್ಮಯ ಸೆಳೆತ .. ಸಾಲು ಸಾಲಿನಲ್ಲೂ ಕುತೂಹಲ ಕಲ್ಪಿಸುತ .. ಅನನ್ಯ ಅಪ್ರತಿಮ ಪ್ರಬುದ್ದ ರಚನೆಯ ಸಂಕೇತವಾಗಿ .. ಮತ್ತೆ ಮತ್ತೆ ಓದಲು ಹತ್ತಿರ ಕರೆಯುತ್ತಿದೆ.. ನಿಜಕ್ಕೂ ಅತ್ಯುನ್ನತ ಕವಿತೆ .. ಅತೀ ಸೊಗಸಾಗಿದೆ.. :)

    ReplyDelete