Wednesday, November 21, 2012

[ ನಾನು ಬರೆದ 25ನೇ ಚಿತ್ರಗೀತೆ..!!!!
'ಸಂಧ್ಯಾರಾಗ' ಚಿತ್ರದ, 'ಪೂರಿಯಾ  ಕಲ್ಯಾಣ' ರಾಗದಲ್ಲಿರುವ, 'ನಂಬಿದೆ ನಿನ್ನ ನಾದದೇವತೆಯೇ' ಹಾಡಿನ ಧಾಟಿಗೆ ಬರೆದ ನೂತನ ಗೀತೆ.. ಶಿವನ ಸ್ತೋತ್ರ ರೂಪದಲ್ಲಿ...]ಪಾಲಿಸು ದೇವ ಪಾರ್ವತೀಧಣಿಯೆ..
ಲಯತಾಳದೊಡನೆ ಕುಣಿವ ನಟಮಣಿಯೆ..|
ಉರಗಭಸ್ಮಭೂಷಿತ ಶರೀರಿಯೇ..
ಡಮರುಶೂಲಧರ ಕೈಲಾಸದೊರೆಯೇ..||


ಪಾಲಿಸು ದೇವ ಪಾರ್ವತೀಧಣಿಯೆ..|

ನಂದಿಗಮನ ಪದ ಪೊಂದಿದೆ ಛಂದದಿ,
ಅಂಧವ ನಂದಿಸೋ ಇಂದುವಿನಂದದಿ..
ಕುಂದು..ನೂರೆಂಟಿದೆ..
ಒಂದೂ..ಗಣಿಸದೆ..
ದೇವ..ದೇವ..ಕಾರುಣ್ಯದಾಂಬುಧೇ..
ಬಂಧು ಕಾಣೆ ನೀನಲ್ಲದೆ...
ತಂದೆಯಂತೆ ಪೊರೆ ಹಿಂಗದೆ...||  

2 comments:

  1. ಅದೇ ಶೈಲಿಯಲ್ಲಿ ಹಾಡಿಕೊಂಡೆ ಬಲು ಮುದ ನೀಡಿತು.

    ReplyDelete
  2. ಚೆನ್ನಾಗಿದೆ ಭೀಮಸೇನರೇ.

    ಸಿನೆಮಾ ಹಾಡುಗಳ ಗೇಯತೆಗಿಂತ ನಿಮ್ಮ ಹಾಡುಗಳು ಚೆನ್ನಾಗಿದೆ, ಪ್ರಾಸಬದ್ಧವಾಗಿರುತ್ತವೆ.

    ReplyDelete