Thursday, December 20, 2012

ದ್ವಂದ್ವ..!!




ನಯನಗೋಚರದ ಋತವಿಷಯಗಳಿಗನೃತತ್ವ
ಕಾಣಿಸದ ಅನೃತ ಸಂಗತಿಗಳಿಗೆ ಋತವು..
ಒಬ್ಬೊಬ್ಬರೊಂದೊಂದು ದೃಷ್ಟಿ ಕಾಲಾತೀತ
ಪರ-ವಿರೋಧದ ನಡುವೆ ಸಮಾನ ಅಂತರವು..


ಧರ್ಮವನೆ ಜೀವಿಸುವ ಧರ್ಮನಿಷ್ಠನು ಅಲ್ಲಿ
ಧರ್ಮವಿಲ್ಲದೆ ದೈವದೂಷಕನೂ ಇಹನಿಲ್ಲಿ..
ನಡುಮಧ್ಯೆ ದೇವರನೆ ವ್ಯಾಪಾರ ಮಾಡುವವ
ಅದರೊಳಗೂ ಒಂದಿಷ್ಟು ಕಾಪಟ್ಯದ ವಿಶ್ವ..

ಇತಿಹಾಸವನು ಮರೆತು ಮೆದ್ದು ಮಲಗಿಹನೊಬ್ಬ
ಚರಿತೆಪುಟಗಳ ಕೆದಕಿ ಓದಿ ಬೀಗುವನೊಬ್ಬ.
ನಡುಮಧ್ಯೆ ಎಲ್ಲವನು ತಿರುಚಿ ಹೇಳುತ ನಿತ್ಯ
ಕಲಸುಮೇಲೋಗರವು ಗತ ಸತ್ಯ-ಮಿಥ್ಯ..

ದೇಶದುತ್ಥಾನದಲಿ ಉಸಿರು ಬಸಿದಿಹ ಧೀರ
ದೇಶವನೆ ಕೊಳ್ಳೆಹೊಡೆದಾತ್ಮಹೀನನು ಚೋರ..
ನಡುಮಧ್ಯೆ ದೇಶಭಾಷೆಯ ಪತಾಕೆಯ ಹೊತ್ತು
ತಮ್ಮ ಮನೆ ಸೂರಿನೊಳು ಮುಚ್ಚಿಹರು ತೂತು..

ಲೋಕದ ಉಗಿಬಂಡಿ ಸಾಗಿದೆ ನಿರಂತರವು
ಎಂದಿಗೂ ಒಂದಾಗದಿಹ ಹಳಿಯ ಮೇಲೆ..

ಅಂಕುಡೊಂಕುಗಳಾಟ ಇದ್ದರೂ ಅಲ್ಲಿಲ್ಲಿ
ಬಿದ್ದಿಲ್ಲ ಉಗಿಬಂಡಿ ; ಇದು ಯಾರ ಲೀಲೆ..?!!!!!
 


ಚಿತ್ರಕೃಪೆ - ಅಂತರ್ಜಾಲ

2 comments:

  1. ಬದುಕಿನ ನಿರಂತರತೆಯ ನಡುವೆ, ಮಾನವನ ವಿಭಿನ್ನತೆಯನ್ನು ದಾಖಲಿಸುವ ಕವನ.

    ReplyDelete
  2. ಭಾರತದ ವಾಸ್ತವಿಕ ಸ್ಥಿತಿಯನ್ನು ಅರುಹುವ ಉತ್ತಮ ಕವನ

    ReplyDelete