Wednesday, February 20, 2013

ಮನೋಹರಿ..!!!!!!!


ಬಿರಿದ ಮಲ್ಲಿಗೆ ನೋಟದರೆ ಲೇಖನಿಯ ಹಿಡಿದು
ಗೀಚಿರಲು ಪ್ರೇಮಚಿತ್ರವ ಹೃದಯದೊಳಗೆ..
ಬರೆದ ಚಿತ್ರಕೆ ವರ್ಣ ಭರಿಸುವಾಕೆಯೂ ನೀನೇ
ಚಾಚಿರುವ ಮುಂಗುರುಳ ಬಳಸು ಹೀಗೆ..||


ಹಲವು ಕಾವ್ಯಗಳರಸಿಯರ ಮೀರಿಸುವ 
ದಧಿಯ ಬೆಣ್ಣೆಯ ತೆರದಿ ಮೈಯ ನುಣುಪು..
ಚೆಲುವಿನ ಕುಂಭದೊಳು ತುಳುಕಿ ಹೊರಚೆಲ್ಲಿರುವ
ಸುಧೆಯ ಹನಿಗಳ ಪೂರ ನಿನ್ನ ಹೊಳಪು..||


ನಿನ್ನ ಬೆರಳಿನ ಮಂತ್ರದಂಡದಿಂ ಆಗಾಗ್ಗೆ
ಸ್ಪರ್ಶಿಸಿರೆ ಹೊಸಹೊಸತು ರೂಪ ಲಾಸ್ಯ..
ಭಿನ್ನ ಲೋಕದಿ ಹಾರಿ, ಮೀರುತ ನಿಹಾರಿಕೆಯ
ಹರ್ಷನಕ್ಷತ್ರವರ್ಷದಿ ಎನ್ನ ದಾಸ್ಯ..||

ಓಡಿ ಬರುವೆನು ಸಣ್ಣ ಕರೆಗೂ ನೀನಿರುವಲ್ಲೇ

ಹವಣಿಸುತ ನುಸುಳಿರಲಿ ಸಿಹಿಮಾತು ಮೌನ..
ನಾಡಿಮಿಡಿತವ ಬಲ್ಲ ನಲ್ಲೆ ನರನಾಡಿಯೊಳು
ಪ್ರವಹಿಸುತ ಜೀವಂತವಾಗಿರಿಸು ನನ್ನ..||

4 comments:

  1. ವಾಹ್ ವಾಹ್ !! ಅಮೋಘ ಕಲ್ಪನೆ .. ಪ್ರೀತಿಯ ವಿವರಣೆ ವರ್ಣನೆ ಬಲು ಸೊಗಸಾಗಿದೆ .. :)

    ReplyDelete
  2. ಆಹಾ,, ವಹರೇ ವಹರೇ!!

    ನಾಡಿಮಿಡಿತವ ಬಲ್ಲ ನಲ್ಲೆ ನರನಾಡಿಯೊಳು
    ಪ್ರವಹಿಸುತ ಜೀವಂತವಾಗಿರಿಸು ನನ್ನ!

    ReplyDelete
  3. "ಬರೆದ ಚಿತ್ರಕೆ ವರ್ಣ ಭರಿಸುವಾಕೆಯೂ ನೀನೇ", ಆಹಾ ಕವಿ ಮಹಾಶಯ ಎನಿತು ರಸ ಪೂರ್ಣವಾಗಿ ನಿಜವನ್ನೇ ಬರೆದಿದ್ದೀರಿ.

    ಮೆಚ್ಚಿದೆ.

    ReplyDelete