Thursday, January 19, 2012


( "ಸಂಚಾರಿ" ಚಿತ್ರದ, "ಗಾಳಿಯೇ ನೋಡು ಬಾ ದೀಪದ ನರ್ತನ.." ಎಂಬ ಹಾಡಿನ ಧಾಟಿಗೆ ನೂತನ ಸಾಹಿತ್ಯ..)


ಪ್ರೀತಿಯ ನಾದಕೆ ಮೂಡಿದ ಭಾವ ನಾ..
ಕಾಂತಿಯ ಸ್ವಾದಕೆ ಕಾದಿಹ ಹೂವು ನಾ..
ನೀನೀಗ ನಿಂತಲ್ಲೇ ನೂರಾರು ಗಾನ..
ಬಾನಿಂದ ಜಾರುತ್ತ ತಾರೇನು ಮೌನ..
ನವಿರಾಗಿಸು ಚೇತನ..!!!


ಪ್ರೀತಿಯ ನಾದಕೆ ಮೂಡಿದ ಭಾವ ನಾ..
ಕಾಂತಿಯ ಸ್ವಾದಕೆ ಕಾದಿಹ ಹೂವು ನಾ..


ಸವಿಗನಸಲ್ಲಿಯ ವಾಹಿನಿಯಲ್ಲಿಯೇ ಬರಿ ನಿನ್ನಂದದ ವಾರ್ತೆಯು..
ಪ್ರತಿಚಣದಲ್ಲಿಯೂ ಕಣ್ಣೆವೆಯಲ್ಲಿಯೂ ಸಿರಿ ಶೃಂಗಾರದ ಮೂರ್ತಿಯು..
......................
ಸೆಳೆತ ಹೆಚ್ಚಾಗಿದೆ.. ಉಳಿಸಿಬಿಡು ನನ್ನ..
ನವಿರಾಗಿಸು ಚೇತನ....||1||


ಪ್ರೀತಿಯ ನಾದಕೆ ಮೂಡಿದ ಭಾವ ನಾ..
ಕಾಂತಿಯ ಸ್ವಾದಕೆ ಕಾದಿಹ ಹೂವು ನಾ..


ನಸುನಗೆಯ ಹನಿ, ಇಳಿವಾಗ ಎದೆ ಹಸಿರಾದಂತೆ ಚೆಲುವಾಗಿದೆ..
ಪಿಸುಮಾತಾಡುತ ಜೊತೆಗೂಡಿ ಮನ, ಹೊಸದಾದಂಥ ಒಲವಾಗಿದೆ..
...................
ನೆರಳು ಒಂದಾಗಿದೆ.. ಬೆಳಕು ಹಿಡಿಯೋಣ..
ನವಿರಾಗಿಸು ಚೇತನ... ||2||


ಪ್ರೀತಿಯ ನಾದಕೆ ಮೂಡಿದ ಭಾವ ನಾ..
ಕಾಂತಿಯ ಸ್ವಾದಕೆ ಕಾದಿಹ ಹೂವು ನಾ..

3 comments:

  1. ಮನಸೆಳೆಯುವ ಸಾಲುಗಳು.. ಭೀಮಸೇನ್ ... :)
    ಸಂಚಾರಿ ಚಿತ್ರದ ಹಾಡು ಅಷ್ಟೊಂದು ನೆನಪಿಲ್ಲ..
    ಆದರೆ ನಿಮ್ಮ ಈ ಹಾಡು ತುಂಬಾನೇ ಸೊಗಸಾಗಿದೆ.. :)
    ಬಹಳಾ ಇಷ್ಟ ಆಯಿತು .. ಮನಸೆಳೆಯುವ ಸಾಹಿತ್ಯ..

    ReplyDelete
  2. uttama upame saalugalu, kaantiya svaadake kaadiha hoovu naa .. Sundara sir. Abinandanegalu sir.

    ReplyDelete