Thursday, January 17, 2013

ಕನ್ನಡದ ಚಂದ್ರ..



ಭಾಷೆಗಳ ಬಾನಲ್ಲಿ 
ಕನ್ನಡತಿ ಮುಡಿದಿಹಳು
ಸೌಂದರ್ಯಕೇಂದ್ರ...
ಸಾವಿರನಿಹಾರಿಕೆಗು
ಭೂಷಣದಿ ಮೆರೆದಿಹುದು
ಕನ್ನಡದ ಚಂದ್ರ..

ಕವಿಕಿರಣಗಣದಿಂದ
ಲಾಲಿತ್ಯಚಂದ್ರಿಕೆಯ
ಹೊಮ್ಮಿಸಿದ ಚಂದ್ರ..
ಬುಧನೈದಿಲೆಯು ಹರವಿ
ಸುಧೆಯೊಳಗೆ ಸಂಭ್ರಮಿಸಿ
ಆನಂದಸಾಂದ್ರ..

ತಾಯಿ ಉಣಿಸಿದ ಮೊದಲ
ತುತ್ತಿನಲು, ಮುತ್ತಿನಲು
ಆಹ್ಲಾದಚಂದ್ರ..  
ವದನದಂಗಳದಲ್ಲಿ
ಗೆಳೆಯರಾಟದಿ ಬೆಳೆದ
ಬೃಂದಾವನೇಂದ್ರ...||

ಕೆಡುಕುತಿಮಿರವ ಸೀಳಿ
ಚಿತ್ತಭಿತ್ತಿಯ ಪೂರ್ತಿ
ಧವಲಿಸಿದ ಚಂದ್ರ..
ಕ್ಷಣಕೂ ಸಂಸ್ಕೃತಿಹಾದಿ
ಮಾಧುರ್ಯನಾದವನು 
ಮೀಟಿಹುದು ಮಂದ್ರ..||


ಚಿತ್ರಕೃಪೆ-ಅಂತರ್ಜಾಲ

1 comment:

  1. ವಾವ್ ಎಂತಹ ಕನ್ನಡ ಪ್ರೀತಿಯ ಹಾಡು.

    ಆಹ್ಲಾದಚಂದ್ರ.. ಅಮೋಘ ಪದ ಲಾಲಿತ್ಯ ಪ್ರಸ್ತುತಿ.

    ReplyDelete