Tuesday, January 24, 2012

        ಧನ್ಯತೆ 

ನಿನ್ನ ಮೊಗಮಲ್ಲಿಗೆಯ, ದಳದ ಬಿಂದುವಿನಲ್ಲಿ
ಎನ್ನ ನಗೆ ಕಾಣಿಸಲು ಧನ್ಯನಾದೆ..
ಬಾಳಿನಾಟದಿ ನಿತ್ಯ, ಅರಸಿ ನಿನ್ನಯ ಪ್ರೀತಿ
ಪಾರಿತೋಷಕ ಸಿಗಲು ಮಾನ್ಯನಾದೆ..!

ಬಾಚುತಲಿ ತೋಳಿನ ವೀಚಿಯೊಳು ಹೃನ್ಮನವು
ನಲಿವಂತೆ ಮಂಜಿನ ನಲ್ಮೆ ಉಷೆಗೆ..
ಲಹರಿಗಳ ಹಾಳೆಯಲಿ, ಸ್ವಪ್ನಗಳ ಗೀಚಿಡುವೆ
ವ್ಯಾಖ್ಯಾನ ಬರೆದಿರಿಸು ನನ್ನ ವಶಕೆ..!

ಭವಿತವ್ಯ ಬಾಂದಳದಿ ಧ್ರುವದಂತೆ ಸ್ಫುಟವಾಗಿ
ನಯನದೊಳಿರೆ ಗಮ್ಯ ಪಯಣ ನಿರುತ
ಸುಕ್ಕುಗಟ್ಟದೇ ಕ್ರಮದಿ, ಯೌವನದ ಹಾದಿಯಲೇ
ಸ್ಫುರಿಸಿರಲಿ ಈ ನಮ್ಮ ಪ್ರಣಯಸ್ರೋತ..!

4 comments:

  1. ಭೀಮಣ್ಣ ನಿಮ್ಮಲ್ಲಿನ ಕವಿತೆಯನ್ನು ಸೃಜಿಸುವ ಸಾಮರ್ಥ್ಯ ನೋಡಿ ನಾನು ಮೂಕನಾಗಿದ್ದೇನೆ.. ದೇಶಭಕ್ತಿಯನ್ನು ಧಾರೆಯಾಗರಿಸಲು ನಿಂತರೆ ಅಪ್ಪಟ ದೇಶಭಕ್ತರಾಗಿಬಿಡುತ್ತೀರಿ.. ಪ್ರೇಮಧಾರೆ ಹರಿಸಲು ನಿಂತರೆ ಪ್ರೇಮಕವಿಯಾಗಿ ಬಿಡುತ್ತೀರಿ.. ತುಂಬಾ ಸುಂದರವಾದ ಕವಿತೆಯಿದು.. ಪ್ರೀತಿಯ ಭಾವಗಳಿಗೆ ಬಣ್ಣ ನೀಡಿ ಸುಂದರವಾಗಿ ಅಲಂಕರಿಸಿದ್ದೀರಿ.. ಪದಗಳ ಪ್ರಯೋಗ ಮತ್ತು ಸುಂದರ ನಿರೂಪಣೆ ನಿಮ್ಮ ಕವಿತೆಗಳಲ್ಲಿನ ತಾಕತ್ತು.. ತುಂಬಾ ಸುಂದರವಾದ ಕವಿತೆ.. ತೀವ್ರವಾದ ಭಾವಗಳ ಅಭಿವ್ಯಕ್ತಿ.. ತುಂಬಾ ಇಷ್ಟವಾಯ್ತು..:)))

    ReplyDelete
    Replies
    1. ನಿಮ್ಮ ಪ್ರೀತಿಯ ಪಾರಿತೋಷಕ ಸಿಗಲು ಧನ್ಯನಾದೆ..

      Delete
  2. ಅಂತ್ಯಪ್ರಾಸ ಮತ್ತೆ ಒಳ್ಳೆಯ ಅರ್ಥಗರ್ಭಿತ ಶಬ್ಧಗಳು. ಸರಿಯಾದ ಬದ್ದತೆಯಿಂದ ಕವನ ಬರೆದಿದ್ದೀರಿ.

    ReplyDelete
    Replies
    1. ಕಿರಣಣ್ಣ, ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು..
      ನಿಮ್ಮಂತಹ ಹಿರಿಯರ ಮಾರ್ಗದರ್ಶನ ಅವಶ್ಯಕ..

      Delete